top of page

ನಾನು ಕುಂತಿ... (ಭಾಗ 2)

1 day ago
2 min read

ಸಾಂಸಾರಿಕ ಜೀವನ ಸಾಗಿಸುವ ಕನಸನ್ನು ಹೊತ್ತಿರುವ ನನಗೆ ಮಾದ್ರಿಯ ಬಗೆಗಾಗಲೀ, ಪತಿ ಪಾಂಡುವಿನ ಬಗೆಗಾಲೀ ಬೇಸರವಿರಲಿಲ್ಲ. ಈಗಾಗಲೇ ದೂರವಾದ ಮಗುವಿನ ನೆನಪನ್ನು ಮರೆಯುವುದಕ್ಕಾಗಿ ಪಾಂಡುವಿನಿಂದ ಮಗುವ ಪಡೆಯುವ ಹಂಬಲದಲ್ಲಿದ್ದೆ.. ಆದರೆ ವಿಧಿ ಬೇರೆಯೇ ಆಟವಾಡಿತ್ತು. ಬೇಟೆಯಾಡಲು ಹೋಗಿದ್ದ ಮಹಾರಾಜ ಕಿಂದಮ ಮಹರ್ಷಿ ಗಳಿಂದ ಶಾಪವನ್ನು ಪಡೆದು ಬಂದರು. ಸತಿಯ ಜೊತೆ ಸೇರುವ ಮುನ್ನ ಮರಣಹೊಂದು ಎಂದು ಶಾಪವನ್ನೇನೋ ಇತ್ತರು.. ಆದರೆ.. ಆ ಶಾಪ ಕೇವಲ ಪಾಂಡುವಿಗೆ ಮಾತ್ರ ಸೀಮಿತವಾಗಿರಲಿಲ್ಲ.. ನನಗೆ ಮತ್ತು ಮಾದ್ರಿಗೂ ತಾಗಿತ್ತು.. ನಮ್ಮ ಕನಸಿಗೆ... ಆಸೆಗೆ ಎಲ್ಲದಕ್ಕೂ ಶಾಪ ಬಿದ್ದಿತ್ತು.. ಮುಂದೆ..??? ಪಾಂಡು ರಾಜರೇನೋ ಎಲ್ಲವೂ ತ್ಯಜಿಸಿ ಅರಣ್ಯದತ್ತ ನಡೆದರು... ನಮಗೋ ಅವರ ಹಿಂದೆ ಹೋಗುವುದು ಅನಿವಾರ್ಯ.. ಆದರೆ ನನ್ನ ಮನಸಲ್ಲಿ ಮುಂದೆ? ಎಂಬ ಪ್ರಶ್ನೆ ಸದಾ ಕಾಡುತ್ತಿತ್ತು...


ನಾನು ಕುಂತಿ... (ಭಾಗ 2)

ನನಗೇನೋ ವರವಿತ್ತು... ಆದರೆ ಅದನ್ನು ಹೇಳಿದರೆ ಪಾಂಡುರಾಜರು ಒಪ್ಪಿಕೊಳ್ಳುತ್ತಾರೋ.. ಇಲ್ಲವೋ ಎಂಬ ಭಯ.. ಯಾವಾಗ ಅವರ ಮನದಲ್ಲೂ ತನ್ನ ಸಂತಾನದ ಬಗ್ಗೆ ಯೋಚನೆ ಶುರುವಾಯ್ತೋ ಆಗ ಏನಾದರಾಗಲಿ ಎಂದು ಹೇಳಿಯೇ ಬಿಟ್ಟೆ.. ನಾನು ಅಂದುಕೊಂಡದ್ದಕ್ಕಿಂತ ಹೆಚ್ಚು ಖುಶಿ ಪಟ್ಟರು. ತನಗೆ ಎಂತಹ ಮಗು ಬೇಕು ಎಂದು ಅವರೇ ಹೇಳಿ ದೇವತೆಗಳನ್ನೂ ಅವರೇ ಹೆಸರಿಸತೊಡಗಿದರು. ದರ್ಮ ಪರಿಪಾಲಕನಾಗುವ ಪುತ್ರ ಬೇಕೆಂಬ ಆಸೆ ಅವರಿಗೆ. ಹಾಗಾಗಿಯೇ ಯಮಧರ್ಮರಾಜರನ್ನೇ ಮೊದಲು ಹೆಸರಿಸಿದ್ದು.. ಅದಾದಮೇಲೆ ಅತೀ ಶಕ್ತಿ ಶಾಲಿಯಾದ ವಾಯುದೇವರಿಂದ, ದೇವಲೋಕದ ಇಂದ್ರದೇವನಿಂದ ಹೀಗೆ ಮೂರು ಪುತ್ರರತ್ನರನ್ನ ಪಡೆದ ನನಗೋ ಮಕ್ಕಳನ್ನು ನೋಡುವುದೇ ಒಂದು ಖುಶಿ.. ಮುದ್ದು ಮುದ್ದಾದ ಮಕ್ಕಳ ಆರೈಕೆಯಲ್ಲಿ ಪಾಂಡು ರಾಜರು ತುಂಬಾ ಖುಶಿಯಾಗಿದ್ದರು.. ಆದರೆ.. ಮಾದ್ರಿ?? ಪಾಪ... ಪೂರ್ಣವಾಗಿ ನೊಂದುಕೊಂಡಿದ್ದಳು.. ಪತಿಯ ಸಾಮಿಪ್ಯವಿಲ್ಲ.. ಮಕ್ಕಳ ಒಲವಿಲ್ಲ.. ಒಂಟಿಯಾಗಿದ್ದಳು.. ಅವಳ ನೋವನ್ನು ನನ್ನಲ್ಲಿ ಬಂದು ಹೇಳಿಕೊಂಡಾಗಲೇ ನನಗೆ ನನ್ನಲ್ಲಿ ಉಳಿದ ಒಂದು ವರವನ್ನು ಅವಳಿಗೇ ನೀಡೋಣ ಅನ್ನಿಸಿ ಕೊಟ್ಟುಬಿಟ್ಟೆ.. ಆ ವರದಿಂದ ಅಶ್ವಿನಿ ದೇವತೆಗಳಿಂದ ಪಡೆದ ಮಕ್ಕಳನ್ನು ಪಡೆದು ಅವಳೂ ನೆಮ್ಮದಿಯಾದಳು.. ಐದು ಮಂದಿ ಪಾಂಡು ಮಕ್ಕಳಾದರು. ಹಿರಿಯವ ಯುಧಿಷ್ಟಿರ, ಎರಡನೆಯವನು ಭೀಮ, ಮೂರನೆಯವನು ಅರ್ಜುನ, ನಂತರ ನಕುಲ ಮತ್ತು ಸಹದೇವರು. ನಕುಲ ಸಹದೇವರು ಮಾದ್ರಿಯ ಪುತ್ರರಾದರೂ ಎಂದೂ ನನಗೆ ಸವತಿ ಮಾತ್ಸರ್ಯ ಬಂದಿದ್ದಿಲಗಲ್ಲ... ಇನ್ನೆಲ್ಲವೂ ಒಳಿತೇ ಆಗುತಿದೆ.. ಪಾಂಡು ಮಹಾರಾಜ ಪುತ್ರರ ಆಟೋಟಗಳ ನೋಡುತ್ತಾ ಸಂತೋಷವಾಗಿದ್ದಾರೆ... ಸಂತಾನವಾಯ್ತು.. ಎಂದು ನೆಮ್ಮದಿ ಪಡುತ್ತಿರುವಾಗಲೇ.. ಪತಿಯ ವಿಯೋಗ ನನಗೆ ಒದಗಿ ಬಂತು.. ಪತಿಯ ಸಾವಿಗೆ ತಾನೇ ಕಾರಣಳಾದೆ.. ಎಂದು ಮಾದ್ರಿಯೂ ಸಹಗಮನ ಮಾಡಿದಳು... ಆದರೆ ನಾನು?? ಪುಟ್ಟ ಐದು ಮಕ್ಕಳನ್ನು ಸಾಕುವುದು ಹೇಗೆ? ಅನಿವಾರ್ಯವಾಗಿ ಮರಳಿ ಹಸ್ತಿನಾವತಿಗೆ ಬಂದೆ. ತಾಯಿ ಇಲ್ಲದ ತವರು.. ಗಂಡನಿಲ್ಲದ ಮನೆ.. ಎರಡೂ ಅತೀ ಕಷ್ಟಕರ.. ಅಲ್ಲಿ ಪ್ರೀತಿಗಿಂತ ಅವಮಾನವೇ ಅತಿಯಾಗಿ ಸಿಗುತ್ತದೆ.. ಅರಮನೆಯಾದರೂ ಅದೇ ಪದ್ದತಿ.. ವಿದವೆಯಾದ ನನಗೆ ಯಾರು ಪ್ರೀತಿ ನೀಡುವರು?? ಅದರಲ್ಲೂ ದೃತರಾಷ್ಟ್ರ ಮಹರಾಜನಾಗಿದ್ದ ಆ ಅರಮನೆಯಲ್ಲಿ ನನಗೆ ನನ್ನ ಮಕ್ಕಳಿಗೆ ಒಳಿತನ್ನು ನೀಡುವವರಾದರೂ ಯಾರು?? ಅವಮಾನ.. ಧ್ವೇಷದ ಮಧ್ಯದಲ್ಲಿಯೇ ನನ್ನ ಮಕ್ಕಳು ಬೆಳೆಯುವ ಅನಿವಾರ್ಯತೆ ಬಂತು.. ಪಾಪ.. ಹಾಗೆಯೇ ಬೆಳೆದರಯ.. ದುರ್ಯೋಧನಾದಿಗಳ ಕುಹಕದ ಮಾತು.. ಕೊಲ್ಲುವ ಸಂಚು.. ಇವೆಲ್ಲದರ ನಡುವೆಯೇ ಹೇಗೋ ಬದುಕುಳಿದರು... ಬೆಳೆದರು.. ಅಂತೂ ಪಿತಾಮಹರಾದ ಭೀಷ್ಮರ ಅಣತಿಯಂತೆ ಗುರುಕುಲಕ್ಕೇ ಕಳಿಸಿಯಾಯ್ತು. ಗುರು ದ್ರೋಣಾಚಾರ್ಯರು ಅತೀ ಬುದ್ದಿವಂತರೂ, ಶಕ್ತಿಶಾಲಿಯೂ ಆಗಿದ್ದಾರಂತೆ.. ಅವರಲ್ಲಿ ನನ್ನ ಮಕ್ಕಳು ವಿದ್ಯೆ ಕಲಿಯುತ್ತಾರೆಂದರೆ.. ನನಗೂ ಹೆಮ್ಮೆಯೇ.. ಆದರೆ ಅಷ್ಟೆಲ್ಲಾ ವರ್ಷಗಳ‌ಕಾಲ ಮಕ್ಕಳಿಂದ ಅಗಲಿರಬೇಕಲ್ಲಾ... ಎಂಬುದೊಂದೇ ಚಿಂತೆ.. ನನಗಾದರೂ ಅರಮನೆಯಲ್ಲಿ ಯಾರಿದ್ದಾರೆ? ಮಕ್ಕಳಿಗಾಗಿಯೇ ಬದುಕುತ್ತಿರುವ ನನಗೆ ಮಕ್ಕಳ ಹೊರತಾಗಿ ಅರಮನೆಯಲ್ಲಷ್ಟೇ ಅಲ್ಲ..‌ ಬದುಕಲ್ಲಾದರೂ ಏನಿದೆ?? ವಿದ್ಯೆಗೆ ನನ್ನ ಮಮತೆ ಅಡ್ಡಿಯಾಗಬಾರದು.. ಮಕ್ಕಳನ್ನೆಲ್ಲಾ ಪ್ರೀತಿಯಿಂದಲೇ ಕಳಿಸಿಕೊಟ್ಟೆ.. ಆದರೆ.. ಆ ಕೌರವರು... ಅಲ್ಲಿಯೂ ಇವರಿಗೇನಾದರೂ ಮಾಡಿಬಿಟ್ಟರೆ... ಎಂಬ ಭಯ ಮನದಲ್ಲಿ ಸದಾ ಇತ್ತು.. ದ್ರೋಣಾಚಾರ್ಯರಿಗೆ ಅರ್ಹುನ ಅತಿ ಪ್ರಿಯವಾದನಂತೆ, ಅವನಿಗಾಗಿಯೇ ಏಕಲವ್ಯನ ಹೆಬ್ಬೆರಳು ಕೇಳಿದರಂತೆ.. ಎಲ್ಲಾ ಸುದ್ದಿಗಳೂ ಕೇಳುತ್ತಲೇ ಇತ್ತು.. ನನಗೋ ನನ್ನ ಮಕ್ಕಳ ಬಗ್ಗೆ ಕೇಳಿದಷ್ಟೂ ಮತ್ತೆ ಕೇಳಬೇಕೆಂಬ ಬಯಕೆ.. ಎಲ್ಲರೂ ಅವರನ್ನು ಪಾಂಡು ಮಕ್ಕಳು.. ಪಾಂಡವರು.. ಎನ್ನುವಾಗ ನನಗೆ ಮತ್ತಷ್ಟು ಹೆಮ್ಮೆಯಾಗುತ್ತಿತ್ತು. ಅಂತೂ ವಿದ್ಯೆ ಕಲಿತು ಮಕ್ಕಳಿನ್ನು ಬರುತ್ತಾರೆ.. ಆರಾಮವಾಗಿ ಅವರ ಜೊತೆ ಇರಬಹುದು ಎಂಬ ಆಸೆ ನನಗೆ. ದ್ರುಪದ ಮಹಾರಾಜನನ್ನು ಸೊಲಿಸಿ, ದ್ರೋಣಾಚಾರ್ಯರಿಗೊಪ್ಪಸಿದ ಸುದ್ದಿ ಕೇಳಿದಾಗಂತೂನನಗೆ ನನ್ನ ಪುತ್ರರನ್ನು ಎಂದು ಕಾಣುತ್ತೇನೋ ಎಂಬ ಕಾತುರ.. ಅಂತೂ ವಿದ್ಯಾವಂತರಾದ ಮಕ್ಕಳು ಹಸ್ತಿನಾವತಿಗೆ ಆಗಮಿಸಿದರು...

ಮುಂದೆ ಸುಖ ಎನ್ನುವುದು ನನ್ನ ಭ್ರಮೆಯಾಗಿತ್ತು..!!

Comments


bottom of page