top of page

ಅಹಲ್ಯೆ - 1

Updated: Aug 10

ಭಾರತೀಯ ಸಂಸ್ಕೃತಿಯ ಪುರಾಣ ಕಥಾ ಹೇಳಿಕೆಗಳಲ್ಲಿ ಅನೇಕ ಪ್ರಸಿದ್ಧಿ ಸ್ತ್ರೀಯರ ಕಥೆ ಬೋಧಪ್ರದವಾಗಿದೆ. ಅಂತಹ ಸ್ತ್ರೀಯರಲ್ಲಿ ಅಹಲ್ಯೆಯ ಜೀವನಕಥೆಯು ವಿಮರ್ಶೆಗೂ ಚಿಂತನೆಗೂ ಅವಕಾಶವಿಟ್ಟಿದೆ.

ಅಹಲ್ಯೆ ಸೃಷ್ಠಿಕರ್ತ ಬ್ರಹ್ಮ ದೇವರ ಮಗಳು. ಅವಳ ಹೆಸರಿನ ಆಧಾರದ ಮೇಲೆ ವಿಮರ್ಶೆ ಇರುವುದು, ಒಂದು ಗೆರೆಯಷ್ಟು ಅಥವಾ ಎಳೆಯಷ್ಟು ಕುಂದಿಲ್ಲದ ಕುರೂಪವಿಲ್ಲದ ಸೌಂದರ್ಯವತಿ ಎಂಬ ಹೊಗಳಿಕೆ ಹೆಗ್ಗಳಿಕೆ ಪಡೆದವಳು. ಬ್ರಹ್ಮನ ಮಗಳಾದ್ದರಿಂದ ಶಾರದೆಯ ಪುತ್ರಿ ಎಂಬುದು ವೈಚಾರಿಕ ನಂಬುಗೆ. ಅಥವಾ ಬ್ರಹ್ಮನ ಮಾನಸ ಪುತ್ರಿ ಎಂಬ ಅಧಿಕೃತ ಹೇಳಿಕೆ ಇಲ್ಲದ ಕಾರಣ ಹೀಗೆ ಹೇಳಿಕೆ ಇದೆ. ಅಹಲ್ಯೆ ಪ್ರಾಯಪ್ರಬುದ್ಧಳಾದಾಗ ಬ್ರಹ್ಮ ಅವಳಿಗೆ ವಿವಾಹವನ್ನು ಮಾಡಬೇಕೆಂದು ಸಂಕಲ್ಪಿಸುತ್ತಾನೆ.


ree

ಅಹಲ್ಯೆಯ ಸೌಂದರ್ಯ ತಿಳಿದ ದೇವೇಂದ್ರ ಅವಳನ್ನು ವಿವಾಹವಾಗುವುದಕ್ಕಾಗಿ ಬರುತ್ತಾನೆ. ಅದೇ ಸಮಯಕ್ಕೆ ಮಹಾತಪಸ್ವಿಯಾದ ಗೌತಮ ಋಷಿಯೂ ಅಹಲ್ಯೆಯನ್ನು ವಿವಾಹವಾಗುವುದಕ್ಕಾಗಿ ಬ್ರಹ್ಮ ಲೋಕಕ್ಕೆ ಬರುತ್ತಾನೆ. ಬ್ರಹ್ಮನಿಗೆ ಯಾರಿಗೆ ಅಹಲ್ಯೆಯನ್ನು ವಿವಾಹ ಮಾಡಿಕೊಡಬೇಕೆಂಬ ಸಂದಿಗ್ಧ ಉಂಟಾದಾಗ ಒಂದು ಪಣವನ್ನಿಡುತ್ತಾನೆ. ಗೌತಮ ದೇವೇಂದ್ರರಲ್ಲಿ ಯಾರು ಮೊದಲು ಭೂಪ್ರದಕ್ಷಿಣೆ ಮಾಡಿ ಬರುತ್ತಾರೋ ಅವರಿಗೆ ಅಹಲ್ಯೆ ಸತಿಯಾಗುತ್ತಾಳೆ ಎಂಬ ವಿಧಿ ನಿರ್ದೇಶನ ಮಾಡುತ್ತಾನೆ.


ದೇವೇಂದ್ರ ಉತ್ಸುಕನಾಗಿ ತನ್ನ ಐರಾವತವೇರಿ ಭೂಪ್ರದಕ್ಷೆಗೆ ಹೋಗುತ್ತಾನೆ. ಆದರೆ ಗೌತಮ ಋಷಿ ಸಂಚಾರಕ್ಕೆ ಬೇರೆ ಮಾಧ್ಯಮ ಇಲ್ಲದವ, ಆಲೋಚಿಸುತ್ತಾನೆ .ಅಲ್ಲೇ ಇರುವ ಕಾಮಧೇನುವಿಗೆ ಪ್ರದಕ್ಷಿಣೆ ಮಾಡಿ, ನಾನೇ ಭೂಮಿ ಸುತ್ತಿ ಬಂದವ ನಾನೇ ಗೆದ್ದೆ ಎಂಬ ಉದ್ಘೋಷ ಮಾಡುತ್ತಾನೆ. ಇದು ಭಾವುಕ ನಂಬುಗೆಯ ವಿಚಾರ , ಭೂ ಎಂಬುದಕ್ಕೂ ಅಂದರೆ ಭೂಮಿಗೂ , ಗೋ ಎಂಬುದಕ್ಕೇ ಅಂದರೆ ಗೋವಿಗೂ ವ್ಯತ್ಯಾಸವಿಲ್ಲ. ಎರಡು ಒಂದೆ ಎಂಬ ನಂಬುಗೆಯ ತೀರ್ಮಾನವಿರುವ ಕಾರಣ ಬ್ರಹ್ಮನು ಒಪ್ಪಿಕೊಂಡು ಅಹಲ್ಯೆಯನ್ನು ಗೌತಮನಿಗೆ ವಿವಾಹ ಮಾಡುತ್ತಾನೆ. ಇಂದ್ರ ಭೂಪ್ರದಕ್ಷಿಣೆ ಮುಗಿಸಿ ಬರುವಷ್ಟು ಸಮಯಕ್ಕೆ ಅಹಲ್ಯೆಯ ವಿವಾಹ ಮುಗಿದಿರುತ್ತದೆ. ಬ್ರಹ್ಮನ ನಿರ್ಣಯ ಪ್ರಶ್ನಿಸಲಾರದೆ ಇಂದ್ರ ಖಿನ್ನವಾಗಿ ತೆರಳುತ್ತಾನೆ.

( ಮುಂದಿನ ಕಥೆ ಮುಂದಿನ ವಾರ )

Comments


bottom of page